ಹೊಂದಿಸಿ ಬರೆಯಿರಿ ಕನ್ನಡದ ಒಂದು ಸಿನಿಮಾವಾಗಿದ್ದು, 2023ರಲ್ಲಿ ತೆರೆಕಂಡಿತು. ರಾಮೇನಹಳ್ಳಿ ಜಗನ್ನಾಥ ಬರೆದು ನಿರ್ದೇಶಿಸಿರುವ ಚೊಚ್ಚಲ ಚಲನಚಿತ್ರ ಇದಾಗಿದ್ದು, ಸಂಡೇ ಸಿನಿಮಾಸ್ ಇದನ್ನು ನಿರ್ಮಿಸಿದೆ. ಈ ಸಿನಿಮಾದಲ್ಲಿ ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ ಮಹಾದೇವ್, ಐಶಾನಿ ಶೆಟ್ಟಿ, ಭಾವನಾ ರಾವ್, ಅನಿರುದ್ಧ್ ಆಚಾರ್ಯ, ಅರ್ಚನಾ ಜೋಯಿಸ್ ಇನ್ನಿತರರು ಅಭಿಯಿಸಿದ್ದಾರೆ. ಈ ಸಿನಿಮಾಗೆ ಜೋ ಕೋಸ್ಟಾ ಸಂಗೀತ ಸಂಯೋಜನೆ ಮಾಡಿದ್ದು, ಶಾಂತಿ ಸಾಗರ್ ಛಾಯಾಗ್ರಾಹಕರಾಗಿದ್ದಾರೆ. ರಾಮೇನಹಳ್ಳಿ ಜಗನ್ನಾಥ ಅವರು ಪ್ರಶಾಂತ್ ರಾಜಪ್ಪ ಮತ್ತು ಮಾಸ್ತಿ ಅವರೊಂದಿಗೆ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾವು ಫೆಬ್ರವರಿ 10, 2023 ರಂದು ಬಿಡುಗಡೆಯಾಯಿತು.. ಏಪ್ರಿಲ್ 1, 2023 ರಂದು ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ತೆರೆಕಂಡಿತು. == ಸಿನಿಮಾ ಪಾತ್ರವರ್ಗ == ನವೀನ್ ಶಂಕರ್ - ರಂಜಿತ್ ಪ್ರವೀಣ್ ತೇಜ್ - ಜಗನ್ ಐಶಾನಿ ಶೆಟ್ಟಿ - ಸನಿಹಾ ಪೊನ್ನಪ್ಪ ಶ್ರೀಮಹಾದೇವ್ - ಕುಮಾರ್ ಭಾವನಾ ರಾವ್ - ಭೂಮಿಕಾ ಸಂಯುಕ್ತಾ ಹೊರ್ನಾಡ್ - ಕವನ ಅರ್ಚನಾ ಜೋಯಿಸ್ - ಪಲ್ಲವಿ ಅನಿರುದ್ಧ್ ಆಚಾರ್ಯ - ಸೋಮಶೇಖರ್ "ಟೈಗರ್ ಸೋಮ" ಅರ್ಚನಾ ಕೊಟ್ಟಿಗೆ - ಭಾನು ಸಿಸಿಲಿಯಾ ದೆಬ್ಬರಾಮ - ಬಾಮ್ಕಾ ಬಜಾರ್ ಹನುಮಂತೇಗೌಡ - ಕಾಲೇಜು ಪ್ರಾಂಶುಪಾಲರು ಮಲ್ಲಿಕಾರ್ಜುನ ದೇವರಮನೆ - ಗುರುಮೂರ್ತಿ, ಪ್ರಾಧ್ಯಾಪಕರು ವಿದ್ಯಾ ಪ್ರಭು - ಕೋಮಲಾ ಮೇಡಂ ಅರ್ಜುನ್ ಎ ಆರ್ - ಪರಮೇಶ್, ಪ್ರಾಧ್ಯಾಪಕರು ಸುನೀಲ್ ಪುರಾಣಿಕ್ - ಸನ್ನಿಹ ತಂದೆ ಅನತವೇಲು - ರಾಮಣ್ಣ ಅವಿನಾಶ್ ಶತಮಾರ್ಷ - ಭುವನ್ (ವಿಶೇಷ ಪಾತ್ರ) ಸುಧಾ ನರಸಿಂಹರಾಜು - ಸೋಮಶೇಖರ್ ಅವರ ತಾಯಿ ಧರ್ಮೇಂದ್ರ ಅರಸ್ - ಕುಮಾರ್ ಅವರ ತಂದೆ ಪ್ರವೀಣ್ ಡಿ.ರಾವ್ - ಕವನ ತಂದೆ ಯೋಗೇಶ್ ಭೋಂಸ್ಲೆ ಪಲ್ಲವಿ ರವೀಂದ್ರನಾಥ್ ಹರಿ ಶರ್ವ == ಸಂಗೀತ == ರಾಮೇನಹಳ್ಳಿ ಜಗನ್ನಾಥ ಅವರು 7 ಹಾಡುಗಳನ್ನು ಬರೆದಿದ್ದು, ಕೆ. ಕಲ್ಯಾಣ್ ಮತ್ತು ಹೃದಯ ಶಿವ ಉಳಿದ ಹಾಡುಗಳನ್ನು ಬರೆದಿದ್ದಾರೆ. ಜೋ ಕೋಸ್ಟಾ ಸಂಗೀತ ಸಂಯೋಜಿಸಿದ್ದಾರೆ ಮತ್ತು ಯುಟ್ಯೂಬ್‌ನಲ್ಲಿ ಸಂಡೇ ಸಿನಿಮಾಸ್ ಲೇಬಲ್ ಅಡಿಯಲ್ಲಿ ಸಂಗೀತ ಬಿಡುಗಡೆ ಮಾಡಲಾಗಿದೆ. == ಉಲ್ಲೇಖಗಳು ==